ಸಂಪುಟಗಳು       ಲೇಖನಗಳು       ಸ್ಥಿರ ಶೀರ್ಷಿಕೆ       ಲೇಖಕರು

ಸ್ವಾಮಿ ವಿವೇಕಾನಂದರು ಎಲ್ಲ ಭಾಷೆಗಳಲ್ಲಿಯೂ ಪತ್ರಿಕೆಗಳನ್ನು ಆರಂಭಿಸಬೇಕು ಎಂದು ಬಯಸಿದ್ದರು. ಅದರಂತೆ ರಾಮಕೃಷ್ಣ ಮಹಾಸಂಘವು ಭಾರತದ ಹಲವಾರು ಮುಖ್ಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಹೊರತರುತ್ತಿದೆ. ಅದರಲ್ಲಿ `ವಿವೇಕಪ್ರಭ'ವೂ ಒಂದಾಗಿದೆ. `ವಿವೇಕಪ್ರಭ' ಪತ್ರಿಕೆಯು ರಾಮಕೃಷ್ಣ ಮಹಾಸಂಘವು ಕನ್ನಡದಲ್ಲಿ ಪ್ರಕಟಿಸುತ್ತಿರುವ ಏಕೈಕ ಮಾಸಪತ್ರಿಕೆಯಾಗಿದೆ. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮವು ಜನವರಿ ೨೦೦೦ ದಿಂದ ಈ ಪತ್ರಿಕೆಯನ್ನು ಹೊರತರುತ್ತಿದೆ. ಪರಿಪೂರ್ಣ ಜೀವನದ ಪರಮಾಪ್ತ ಪತ್ರಿಕೆಯಾದ ಇದು ತನ್ನ ಸುಂದರ ವಿನ್ಯಾಸ, ಉತ್ತಮ ಮಟ್ಟದ ಮುದ್ರಣ ಮತ್ತು ಉದಾತ್ತ ಚಿಂತನೆಗಳಿರುವ ಲೇಖನಗಳಿಗಾಗಿ ಹೆಸರುವಾಸಿಯಾಗಿದೆ. ತನ್ನ ದಶಮಾನೋತ್ಸವದ ಸಂದರ್ಭದಲ್ಲಿ 'ವಿವೇಕಪ್ರಭ'ವು ಕನ್ನಡ ಜನತೆಗೆ ತನ್ನೆಲ್ಲ ಸಾಹಿತ್ಯಸಾಮಗ್ರಿಯನ್ನು ಈ ಅಂತರ್ಜಾಲ ತಾಣದಲ್ಲಿ ಕೊಡುಗೆಯಾಗಿ ನೀಡುತ್ತಿದೆ.

Note: Books are available in djvu format and to view them you must install djvu plugin which is the primary means of viewing DjVu documents. It runs inside most modern browsers including IE7 and above, Firefox, Google Chrome and Safari. To download this plug-in Click below

   
   

ಈ ಪತ್ರಿಕೆ ನಿಮಗೆ

  • ಮನಶ್ಯಾಂತಿಯನ್ನು ಕೊಡುವ,
  • ಶ್ರೇಷ್ಠ ಆನಂದದ ಅನುಭವವನ್ನು ನೀಡುವ,
  • ಬೋಧಾತ್ಮಕ ಕಥೆಗಳನ್ನು ಹೊಂದಿರುವ,
  • ಮಕ್ಕಳ ನೈತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಸಹಾಯಕವಾಗುವ,
  • ನೊಂದ ಮನಸ್ಸಿಗೆ ಸಮಾಧಾನವನ್ನು ಕೊಡುವ
  • ಶ್ರೀರಾಮಕೃಷ್ಣ - ವಿವೇಕಾನಂದ - ವೇದಾಂತ ವಿಚಾರಧಾರೆಯನ್ನು ನೀಡುವ ಪತ್ರಿಕೆಯಾಗಿದೆ.

ಈ ಪತ್ರಿಕೆಯ ಮಹದುದ್ದೇಶಗಳು

  • ಉನ್ನತ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜನರಲ್ಲಿ ಹರಡುವುದು.
  • ಕೌಟುಂಬಿಕ ಮೌಲ್ಯಗಳನ್ನು ಪುನಃ ಸ್ಥಾಪಿಸುವುದು.
  • ನಮ್ಮ ಸಾಂಸ್ಕೃತಿಕ ನೆಲೆಯಲ್ಲಿ ಪುನಃ ನಮ್ಮ ಸಮಾಜವನ್ನು ಪ್ರತಿಷ್ಠಾಪಿಸುವುದು.
  • ನಮ್ಮ ವ್ಯಕ್ತಿತ್ವವನ್ನು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ನಿರ್ಮಿಸುವುದು.
  • ಪರಸ್ಪರ ನಂಬಿಕೆ, ಪ್ರೀತಿ, ಸಹಾನುಭೂತಿ, ಸಹಬಾಳ್ವೆ ಇತ್ಯಾದಿ ಗುಣಗಳ ಅನಿವಾರ್ಯತೆಯನ್ನು ಒತ್ತಿ ಸಾರುವುದು.

Designed by Sriranga ಶ್ರೀರಾಮಕೃಷ್ಣ ಆಶ್ರಮ, `ವಿವೇಕಪ್ರಭ' ವಿಭಾಗ, ಯಾದವಗಿರಿ, ಮೈಸೂರು ೫೭೦೦೨೦
E-mail: vivekaprabha[AT]hotmail[DOT]com, kannada.vivekaprabha[AT]gmail[DOT]com
Comments to webmaster
1746